Pitrarjita Asti Rights: ಪಿತ್ರಾರ್ಜಿತ ಆಸ್ತಿ ಅಂದ್ರೆ ಏನು? ಯಾರಿಗೆಲ್ಲ ಹಕ್ಕು ಇರುತ್ತದೆ? ಆಸ್ತಿ ಹಕ್ಕುಗಳ ಸಂಪೂರ್ಣ ಮಾಹಿತಿ…

WhatsApp Group Join Now
Telegram Group Join Now

Pitrarjita Asti Rights: ಪಿತ್ರಾರ್ಜಿತ ಆಸ್ತಿ ಎಂದರೇನು? ಯಾರಿಗೆ ಜನ್ಮತಃ ಹಕ್ಕು ಇರುತ್ತದೆ? ತಂದೆ-ತಾಯಿ ಆಸ್ತಿ, ಸ್ವಯಾರ್ಜಿತ ಆಸ್ತಿ ಮತ್ತು ಹಂಚಿಕೆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ…

ಭಾರತದಲ್ಲಿ ಆಸ್ತಿ (Property) ವಿಚಾರ ಬಂದಾಗ ಜನರಿಗೆ ಹೆಚ್ಚು ಗೊಂದಲ ಉಂಟಾಗುವ ವಿಷಯವೇ ಪಿತ್ರಾರ್ಜಿತ ಆಸ್ತಿ (Ancestral Property) ಮತ್ತು ಸ್ವಯಾರ್ಜಿತ ಆಸ್ತಿ (Self-Acquired Property) ನಡುವಿನ ವ್ಯತ್ಯಾಸ.

‘ತಾತನ ಆಸ್ತಿ ನನ್ನದೇನಾ?’, ‘ಅಪ್ಪ ಮಾರಿಬಿಟ್ಟರೆ ಏನು ಮಾಡಬೇಕು?’, ‘ಅಮ್ಮನಿಗೆ ಬಂದ ಆಸ್ತಿಯಲ್ಲಿ ಮಕ್ಕಳಿಗೆ ಹಕ್ಕಿದೆಯಾ?’- ಇಂತಹ ಪ್ರಶ್ನೆಗಳು ಸಾಮಾನ್ಯ. ಈ ಲೇಖನದಲ್ಲಿ ಈ ಎಲ್ಲಾ ವಿಷಯಗಳನ್ನು ಸರಳ ಕನ್ನಡದಲ್ಲಿ, ಕಾನೂನು ಪದಜಾಲದಲ್ಲಿ ಗೊಂದಲ ಮಾಡದೆ ವಿವರವಾಗಿ ತಿಳಿದುಕೊಳ್ಳೋಣ.

ಇದನ್ನೂ ಓದಿ: Sarakari Jameenu Sakrama: ಸರ್ಕಾರಿ ಜಮೀನು ಸಕ್ರಮ ಹೇಗೆ? ರೈತರಿಗೆ ಸಂಪೂರ್ಣ ಮಾರ್ಗದರ್ಶಿ

ಪಿತ್ರಾರ್ಜಿತ ಆಸ್ತಿ (Ancestral Property) ಅಂದ್ರೆ ಏನು?

ಪಿತ್ರಾರ್ಜಿತ ಆಸ್ತಿ ಅಂದ್ರೆ, ತಾತನಿಂದ ತಂದೆಗೆ, ತಂದೆಯಿಂದ ಮಗನಿಗೆ, ಹಾಗೆ ನಾಲ್ಕು ಪೀಳಿಗೆಯವರೆಗೆ (four generations) ಮುಂದುವರಿಯುವ ಆಸ್ತಿ.

ಸರಳ ಉದಾಹರಣೆ: ತಾತನಿಗೆ ಇದ್ದ ಜಮೀನು ತಂದೆಗೆ ಬಂದಿತು, ತಂದೆಯಿಂದ ಮಗನಿಗೆ ಬಂತು, ಮಗನಿಂದ ಮೊಮ್ಮಗನಿಗೆ ಹೋಗಬೇಕು. ಈ ರೀತಿಯಾಗಿ ತಲತಲಾಂತರಗಳಿಂದ ಬಂದಿರುವ ಆಸ್ತಿ ಪಿತ್ರಾರ್ಜಿತ ಆಸ್ತಿ ಎಂದು ಕರೆಯಲಾಗುತ್ತದೆ.

ಇದರಲ್ಲಿ ಮುಖ್ಯ ಲಕ್ಷಣ ಏನೆಂದರೆ, ಈ ಆಸ್ತಿಯಲ್ಲಿ ಮಗನಿಗೆ ಜನ್ಮತಃ (by birth) ಹಕ್ಕು ಇರುತ್ತದೆ. ಅಂದರೆ, ತಂದೆ ಜೀವಂತವಾಗಿದ್ದರೂ ಮಗನಿಗೆ ಈ ಆಸ್ತಿಯಲ್ಲಿ ಹಕ್ಕು ಇರುತ್ತದೆ.

ಇದನ್ನೂ ಓದಿ: Farmer ID Update: ರೈತರೇ ಸರ್ಕಾರಿ ಯೋಜನೆ ಪ್ರಯೋಜನ ಪಡೆಯಲು ಕೂಡಲೇ ನಿಮ್ಮ ಎಫ್‌ಐಡಿ ಅಪ್ಡೇಟ್ ಮಾಡಿಸಿ | ಅಪ್ಡೇಟ್ ಮಾಡುವ ವಿಧಾನ ಇಲ್ಲಿದೆ…

ಪಿತ್ರಾರ್ಜಿತ ಆಸ್ತಿಯಲ್ಲಿ ಯಾರಿಗೆ ಹಕ್ಕು?

ಪಿತ್ರಾರ್ಜಿತ ಆಸ್ತಿಯಲ್ಲಿ ಸಾಮಾನ್ಯವಾಗಿ ಈ ಕೆಳಗಿನವರಿಗೆ ಹಕ್ಕು ಇರುತ್ತದೆ:

  • ತಂದೆ
  • ಮಗ
  • ಮಗಳು
  • ಮೊಮ್ಮಕ್ಕಳು

ಹಿಂದೂ ಸಕ್ಸೆಷನ್ ಕಾನೂನು (Hindu Succession Law) ಪ್ರಕಾರ 2005ರ ತಿದ್ದುಪಡಿಯ ನಂತರ ಮಗಳು ಕೂಡ ಮಗನಂತೆ ಸಮಾನ ಹಕ್ಕು ಹೊಂದಿದ್ದಾಳೆ. ಆದ್ದರಿಂದ ಈಗ ಮಗಳು ಕೂಡ ‘coparcener’ ಆಗಿರುತ್ತಾಳೆ.

ಮುಖ್ಯ ಅಂಶ: ಪಿತ್ರಾರ್ಜಿತ ಆಸ್ತಿಯಲ್ಲಿ ಮಗ/ಮಗಳು ಜನ್ಮದಿಂದಲೇ ಪಾಲುದಾರರು. ತಂದೆ ಒಬ್ಬರೇ ಸಂಪೂರ್ಣ ಹಕ್ಕು ಹೊಂದಿರುವುದಿಲ್ಲ. ತಂದೆ ಈ ಆಸ್ತಿಯನ್ನು ತನ್ನ ಇಷ್ಟಕ್ಕೆ ಮಾರಾಟ ಮಾಡಲಾಗುವುದಿಲ್ಲ (unless legal necessity).

ಇದನ್ನೂ ಓದಿ: Land Podi Delay: ಜಮೀನು ಪೋಡಿ: ನಿಮ್ಮ ಅರ್ಜಿ ಸ್ಥಿತಿ ಹೇಗಿದೆ? ರೈತರಿಗೆ ಮಹತ್ವದ ಮಾಹಿತಿ ಇಲ್ಲಿದೆ…

ಪಿತ್ರಾರ್ಜಿತ ಆಸ್ತಿಯನ್ನು ಮಾರಾಟ ಮಾಡಬಹುದಾ?

ಇದು ಬಹಳ ಜನ ಕೇಳುವ ಪ್ರಶ್ನೆ. ಪಿತ್ರಾರ್ಜಿತ ಆಸ್ತಿ ಮಾರಾಟ ಮಾಡಲು ಕುಟುಂಬದ ಎಲ್ಲ ಪಾಲುದಾರರ ಒಪ್ಪಿಗೆ (consent) ಬೇಕು. ಅಥವಾ ಕಾನೂನಾತ್ಮಕ ಅಗತ್ಯ (legal necessity) ಇರಬೇಕು.

ಉದಾಹರಣೆಗೆ ಕುಟುಂಬದ ಚಿಕಿತ್ಸಾ ವೆಚ್ಚ, ಶಿಕ್ಷಣ ವೆಚ್ಚ, ಸಾಲ ತೀರಿಸಲು ಈ ರೀತಿಯ ಅಗತ್ಯ ಇದ್ದರೆ ಮಾತ್ರ ಮಾರಾಟ ನ್ಯಾಯಸಮ್ಮತವಾಗುತ್ತದೆ.

ಇದನ್ನೂ ಓದಿ: Karnataka Summer Weather Forecast 2026: ರಾಜ್ಯಾದ್ಯಂತ ಇನ್ನು ಬಿಸಿಲಬ್ಬರ | ಯಾವ ಜಿಲ್ಲೆಗೆ ಎಷ್ಟು ತಾಪಮಾನ? ಇಲ್ಲಿದೆ ಹವಾಮಾನ ಇಲಾಖೆಯ ತಾಜಾ ಅಪ್ಡೇಟ್ಸ್

ಪಾಲು (Share) ಹೇಗೆ ನಿರ್ಧರಿಸಿಕೊಳ್ಳಬೇಕು?

ಪಿತ್ರಾರ್ಜಿತ ಆಸ್ತಿಯನ್ನು ಹಂಚಿಕೆ (partition) ಮಾಡಿಸಿಕೊಳ್ಳಬಹುದು. ಹಂಚಿಕೆ ಮಾಡುವ ಎರಡು ಮಾರ್ಗಗಳು:

  • ಮೌಖಿಕ ಒಪ್ಪಂದ (Oral Partition)
  • ಕೋರ್ಟ್ ಮೂಲಕ (Court Partition Suit)

ಹಂಚಿಕೆ ಆದ ನಂತರ ನಿಮ್ಮ ಪಾಲು ಎಷ್ಟು ಬರುತ್ತದೆ ಎಂಬುದು ಸ್ಪಷ್ಟವಾಗುತ್ತದೆ. ಆ ಪಾಲು ನಿಮ್ಮ ಸ್ವಯಾರ್ಜಿತ ಆಸ್ತಿ (Self-Acquired Property) ಆಗುತ್ತದೆ.

ನಂತರ ನೀವು ಅದನ್ನು ಮಾರಾಟ ಮಾಡಬಹುದು. ಅಂದರೆ, ಹಂಚಿಕೆಯ ಮೊದಲು ಅದು ಪಿತ್ರಾರ್ಜಿತ. ಹಂಚಿಕೆಯ ನಂತರ ನಿಮ್ಮ ಪಾಲು ನಿಮ್ಮದೇ ಸಂಪೂರ್ಣ ಹಕ್ಕಿನ ಆಸ್ತಿಯಾಗುತ್ತದೆ.

ಇದನ್ನೂ ಓದಿ: Krushi Pumpset: ಶೀಘ್ರ ಸಂಪರ್ಕ ಯೋಜನೆ | ಕೃಷಿ ಪಂಪ್‌ಸೆಟ್‌ಗೆ ತಕ್ಷಣ ವಿದ್ಯುತ್ ಪಡೆಯಲು ಹೇಗೆ ಅರ್ಜಿ ಸಲ್ಲಿಸಬೇಕು? ಸಂಪೂರ್ಣ ಮಾಹಿತಿ…

ಸ್ವಯಾರ್ಜಿತ ಆಸ್ತಿ (Self-Acquired Property) ಅಂದ್ರೆ ಏನು?

ಒಬ್ಬ ವ್ಯಕ್ತಿ ತನ್ನ ಶ್ರಮ, ಬೆವರು, ಸಂಪಾದನೆಯಿಂದ ಖರೀದಿಸಿದ ಆಸ್ತಿ; ಅದೇ ಸ್ವಯಾರ್ಜಿತ ಆಸ್ತಿ. ಉದಾಹರಣೆ: ಉದ್ಯೋಗದಿಂದ ಬಂದ ಹಣದಲ್ಲಿ ಖರೀದಿಸಿದ ಮನೆ, ವ್ಯವಹಾರದಿಂದ ಗಳಿಸಿದ ಜಮೀನು.

ಈ ಆಸ್ತಿಯಲ್ಲಿ ಮಕ್ಕಳಿಗೆ ಜನ್ಮತಃ ಹಕ್ಕಿಲ್ಲ. ತಂದೆ/ತಾಯಿ ಜೀವಂತವಾಗಿರುವಾಗ ಯಾರಿಗೆ ಬೇಕಾದರೂ ಮಾರಾಟ ಮಾಡಬಹುದು. ವಿಲ್ (Will) ಮೂಲಕ ಯಾರಿಗಾದರೂ ಕೊಡಬಹುದು.

Pitrarjita Asti Rights
Pitrarjita Asti Rights

ಇದನ್ನೂ ಓದಿ: NADEP Compost Guide: ಸಗಣಿ ಗೊಬ್ಬರವನ್ನು ಬಳಸುವ ವೈಜ್ಞಾನಿಕ ವಿಧಾನ | ಹೀಗೆ ಬಳಸಿದರೆ ಸಿಗಲಿದೆ ಹತ್ತಾರು ಲಾಭ

ತಾಯಿಯಿಂದ ಬಂದ ಆಸ್ತಿಯಲ್ಲಿ ಹಕ್ಕು ಇದೆಯಾ?

ಇದು ಬಹಳ ಮುಖ್ಯ ವಿಷಯ. ತಾಯಿಗೆ ಅವಳ ತವರು ಮನೆಯಿಂದ ಬಂದ ಆಸ್ತಿ; ಅವಳ ಸ್ವಂತ ಆಸ್ತಿ (absolute property) ಆಗಿರುತ್ತದೆ.

ಅದು ಮಕ್ಕಳಿಗೆ ಕಡ್ಡಾಯವಾಗಿ ಕೊಡಲೇಬೇಕು ಎಂಬ ಕಾನೂನು ಇಲ್ಲ. ಅಂದರೆ, ತಾಯಿ ಜೀವಂತವಾಗಿರುವಾಗ ಆಸ್ತಿಯನ್ನು ಯಾರಿಗಾದರೂ ಮಾರಾಟ ಮಾಡಬಹುದು.

ದಾನ (gift deed) ಮಾಡಬಹುದು. ಮೂರನೇ ವ್ಯಕ್ತಿಗೆ ಕೊಡಬಹುದು. ಮಕ್ಕಳು ‘ಅಜ್ಜಿ ಮನೆ ಆಸ್ತಿ ನಮ್ಮದೇ’ ಎಂದು ಕೋರ್ಟ್ಗೆ ಹೋದರೂ, ತಾಯಿ ಜೀವಂತವಾಗಿರುವ ವರೆಗೆ ಹಕ್ಕು ಸಾಧಿಸಲು ಸಾಧ್ಯವಿಲ್ಲ.

ಇದನ್ನೂ ಓದಿ: Mobile Canteen ₹3 Lakh Subsidy: ಮೊಬೈಲ್ ಕ್ಯಾಂಟಿನ್ ಖರೀದಿಗೆ ₹3 ಲಕ್ಷ ಸಬ್ಸಿಡಿಗೆ ಅರ್ಜಿ ಆಹ್ವಾನ | ಯುವಜನತೆಗೆ ರಾಜ್ಯ ಸರ್ಕಾರದ ಭರ್ಜರಿ ಅವಕಾಶ

ತಂದೆಯ ಆಸ್ತಿ ಮತ್ತು ತಾಯಿಯ ಆಸ್ತಿ ನಡುವಿನ ವ್ಯತ್ಯಾಸ

ಪಿತ್ರಾರ್ಜಿತ ಆಸ್ತಿಯಲ್ಲಿ ಜನ್ಮತಃ ಹಕ್ಕು ಇರುತ್ತದೆ. ಮಾತೃ ಆಸ್ತಿಯಲ್ಲಿ (Mother Side) ಜನ್ಮತಃ ಹಕ್ಕಿಲ್ಲ. ಪಿತ್ರಾರ್ಜಿತ ಆಸ್ತಿ ಮಾರಾಟಕ್ಕೆ ಎಲ್ಲರ ಒಪ್ಪಿಗೆ ಬೇಕು. ಮಾತೃ ಆಸ್ತಿ ಮಾರಾಟಕ್ಕೆ ತಾಯಿ ಸ್ವತಂತ್ರ ಸರಳವಾಗಿ ಹೇಳುವುದಾದರೆ, ಪಿತೃ ಮನೆ ಕಡೆಯಿಂದ ಬಂದ ಆಸ್ತಿ ಪಿತ್ರಾರ್ಜಿತ. ತಾಯಿ ಮನೆ ಕಡೆಯಿಂದ ಬಂದ ಆಸ್ತಿ ತಾಯಿಯ ಸ್ವಂತ ಆಸ್ತಿ!

ತಾತ ಮೊಮ್ಮಗನಿಗೆ ನೇರವಾಗಿ ಆಸ್ತಿ ಕೊಡಬಹುದಾ?

ತಾತನಿಗೆ ಆಸ್ತಿ ಸ್ವಯಾರ್ಜಿತವಾಗಿದ್ದರೆ ಅವನು ಯಾರಿಗಾದರೂ ಕೊಡಬಹುದು. ಮೊಮ್ಮಗನಿಗೆ ನೇರವಾಗಿ ಕೊಡಬಹುದು. ಆದರೆ ಅದು ಪಿತ್ರಾರ್ಜಿತ ಆಸ್ತಿಯಾಗಿದ್ದರೆ, ತಂದೆಯ ಒಪ್ಪಿಗೆ ಅಗತ್ಯ. ಏಕೆಂದರೆ ತಂದೆ ಕೂಡ ಪಾಲುದಾರ.

ಇದನ್ನೂ ಓದಿ: Ginnada Halu Mahatva: ಗಿಣ್ಣದ ಹಾಲುಂಡ ಕರು ರೈತರಿಗೆ ತರುವುದು ಸಿರಿ | ಹೈನುಗಾರಿಕೆಯಲ್ಲಿ ಅಧಿಕ ಲಾಭ ಗಳಿಕೆಗೆ ಗಿಣ್ಣದ ಹಾಲಿನ ಮಹತ್ವ ತಿಳಿಯಿರಿ

ತಂದೆ ಆಸ್ತಿ ಮೇಲೆ ಮಕ್ಕಳಿಗೆ ಯಾವಾಗ ಹಕ್ಕು?

ಇದು ಎರಡು ರೀತಿಯಲ್ಲಿ ನೋಡಬೇಕು:

  1. ಪಿತ್ರಾರ್ಜಿತ ಆಸ್ತಿ: ಮಗ/ಮಗಳಿಗೆ ಜನ್ಮತಃ ಹಕ್ಕು. ತಂದೆ ಒಬ್ಬರೇ ಮಾರಾಟ ಮಾಡಲು ಆಗುವುದಿಲ್ಲ.
  2. ಸ್ವಯಾರ್ಜಿತ ಆಸ್ತಿ: ತಂದೆ ಜೀವಂತವಾಗಿರುವವರೆಗೆ ಮಕ್ಕಳಿಗೆ ಹಕ್ಕಿಲ್ಲ. ತಂದೆ ತನ್ನ ಇಚ್ಛೆಯಂತೆ ವಿಲೇವಾರಿ ಮಾಡಬಹುದು.

ಇದನ್ನೂ ಓದಿ: Bharat-Vistar AI: ಇನ್ಮುಂದೆ ರೈತರ ಎಲ್ಲಾ ಸಮಸ್ಯೆಗೂ ಮೊಬೈಲ್‌ನಲ್ಲಿಯೇ ಪರಿಹಾರ | ನಿಮ್ಮ ಸಮಸ್ಯೆಗೆ ಪರಿಹಾರ ಪಡೆಯೋದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಕಾನೂನು ಜಾಗೃತಿ ಏಕೆ ಮುಖ್ಯ?

ಇಂದಿನ ದಿನಗಳಲ್ಲಿ ಅನೇಕ ಕುಟುಂಬಗಳಲ್ಲಿ ತಾಯಿ ಮನೆ ಆಸ್ತಿ ಬಗ್ಗೆ ತಪ್ಪು ಕಲ್ಪನೆ ಇದೆ. ಪಿತ್ರಾರ್ಜಿತ ಆಸ್ತಿ ಬಗ್ಗೆ ಗೊಂದಲವಿದೆ. ವಿಲ್ ಇಲ್ಲದೆ ಜಗಳ ಏರ್ಪಡುತ್ತಿವೆ. ಕಾನೂನು ಅರಿವಿನ ಕೊರತೆಯಿಂದ ಈ ಎಲ್ಲಾ ಸಮಸ್ಯೆಗಳು ಏದುರಾಗುತ್ತಿವೆ.

ಆದ್ದರಿಂದ ಆಸ್ತಿ ಖರೀದಿ ಮಾಡುವಾಗ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಬೇಕು. ಪಿತ್ರಾರ್ಜಿತ/ಸ್ವಯಾರ್ಜಿತ ಎಂಬುದು ಸ್ಪಷ್ಟಪಡಿಸಿಕೊಳ್ಳಬೇಕು. ಹಂಚಿಕೆ ಬೇಕಾದರೆ ಕಾನೂನು ಮಾರ್ಗ ಅನುಸರಿಸಬೇಕು.

ಇದನ್ನೂ ಓದಿ: Ashraya Housing Scheme Karnataka Details: ಆಶ್ರಯ ಮನೆ ಯೋಜನೆ 2026: ಸ್ವಂತ ಮನೆ ನಿರ್ಮಾಣಕ್ಕೆ 2 ಲಕ್ಷ ರೂ.ವರೆಗೆ ಆರ್ಥಿಕ ನೆರವು | ಸಂಪೂರ್ಣ ಮಾಹಿತಿ

ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು (FAQ)

  • ಪಿತ್ರಾರ್ಜಿತ ಆಸ್ತಿ ಎಷ್ಟು ಪೀಳಿಗೆಗಳವರೆಗೆ?
    – ನಾಲ್ಕು ಪೀಳಿಗೆಗಳವರೆಗೆ.
  • ಮಗಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕಿದೆಯಾ?
    – ಹೌದು, 2005 ನಂತರ ಸಮಾನ ಹಕ್ಕು ಇದೆ.
  • ತಾಯಿ ಮನೆ ಆಸ್ತಿ ಮಕ್ಕಳಿಗೆ ಕಡ್ಡಾಯವೇ?
    – ಇಲ್ಲ. ತಾಯಿ ಇಚ್ಛೆ ಮುಖ್ಯ.
  • ಹಂಚಿಕೆ ಆದ ನಂತರ ಏನಾಗುತ್ತದೆ?
    – ನಿಮ್ಮ ಪಾಲು ನಿಮ್ಮ ಸ್ವಂತ ಆಸ್ತಿಯಾಗುತ್ತದೆ.

ಇದನ್ನೂ ಓದಿ: Land Podi Guide: ಪೋಡಿ ಎಂದರೇನು? ಏಕೆ ಮಾಡಿಸಬೇಕು? ರೈತರಿಗೆ ಸಂಪೂರ್ಣ ಮಾರ್ಗದರ್ಶಿ

ಕಾನೂನು ತಜ್ಞರ ಸಲಹೆ ಪಡೆಯಿರಿ

ಪಿತ್ರಾರ್ಜಿತ ಆಸ್ತಿ ಮತ್ತು ಸ್ವಯಾರ್ಜಿತ ಆಸ್ತಿ ನಡುವಿನ ವ್ಯತ್ಯಾಸ ತಿಳಿದುಕೊಳ್ಳುವುದು ಅತ್ಯಂತ ಮುಖ್ಯ. ಪಿತ್ರಾರ್ಜಿತ ಆಸ್ತಿಯಲ್ಲಿ ಮಕ್ಕಳಿಗೆ ಜನ್ಮತಃ ಹಕ್ಕು ಇದೆ. ಸ್ವಯಾರ್ಜಿತ ಆಸ್ತಿಯಲ್ಲಿ ಆಸ್ತಿ ಮಾಲೀಕರಿಗೆ ಸಂಪೂರ್ಣ ಸ್ವಾತಂತ್ರ‍್ಯ ಇದೆ.

ತಾಯಿ ಮನೆ ಆಸ್ತಿ ಮಕ್ಕಳಿಗೆ ಕಡ್ಡಾಯವಾಗಿ ಬರಬೇಕೆಂಬುದು ತಪ್ಪು ಕಲ್ಪನೆ.ಕುಟುಂಬದಲ್ಲಿ ಜಗಳ, ಕೋರ್ಟ್ ಪ್ರಕರಣಗಳು ತಪ್ಪಿಸಲು ಕಾನೂನು ಅರಿವು ಅಗತ್ಯ. ಸರಿಯಾದ ದಾಖಲೆಗಳು ಮುಖ್ಯ. ಅಗತ್ಯವಿದ್ದರೆ ಕಾನೂನು ತಜ್ಞರ ಸಲಹೆ ಪಡೆಯುವುದು ಒಳಿತು.

Sarakari Jameenu Sakrama: ಸರ್ಕಾರಿ ಜಮೀನು ಸಕ್ರಮ ಹೇಗೆ? ರೈತರಿಗೆ ಸಂಪೂರ್ಣ ಮಾರ್ಗದರ್ಶಿ

WhatsApp Group Join Now
Telegram Group Join Now

Leave a Comment