Arecanut Summer Management: ಬೇಸಿಗೆಯಲ್ಲಿ ಅಡಿಕೆ ಕಾಂಡ ಸುಡುವ ಸಮಸ್ಯೆ | ಇಳುವರಿ ಕುಂಠಿತವಾಗುವ ಮುನ್ನ ಈ ಕ್ರಮ ಅನುಸರಿಸಿ | ಸಮಸ್ಯೆಗೆ ಪರ್ಫೆಕ್ಟ್ ಪರಿಹಾರ ಇಲ್ಲಿದೆ

WhatsApp Group Join Now
Telegram Group Join Now

Arecanut Summer Management: ಬೇಸಿಗೆಯಲ್ಲಿ ಅಡಿಕೆ ಕಾಂಡ ಸುಡುವ (Sun Scorch) ಸಮಸ್ಯೆ ಏಕೆ ಬರುತ್ತದೆ? ಸುಣ್ಣ ಲೇಪನ, Copper Oxychloride ಬಳಕೆ ಮತ್ತು ಸಂಪೂರ್ಣ ತಡೆ ಕ್ರಮಗಳ ವಿವರ ಇಲ್ಲಿದೆ…

ನಮಗೆಲ್ಲ ಗೊತ್ತಿರುವಂತೆ ಇದೀಗ ಬೇಸಿಗೆ (Summer Season) ಆರಂಭವಾಗುತ್ತಿದೆ. ಜನವರಿ 14ರ ಸಂಕ್ರಾಂತಿ ನಂತರ ಸೂರ್ಯನ ಕಿರಣಗಳು ನೇರವಾಗಿ ಭೂಮಿಗೆ ಬೀಳುವ ಪ್ರಮಾಣ ಹೆಚ್ಚಾಗುತ್ತದೆ.

ಇದರ ಪರಿಣಾಮವಾಗಿ ಮಧ್ಯಾಹ್ನ 2 ಗಂಟೆಯ ನಂತರ ಬಿಸಿಲಿನ ತೀವ್ರತೆ ಹೆಚ್ಚು ಕಾಣಿಸಿಕೊಳ್ಳುತ್ತದೆ. ಈ ಸಮಯದಲ್ಲಿ ವಿಶೇಷವಾಗಿ ಸಣ್ಣ ಅಡಿಕೆ ಗಿಡಗಳು (Arecanut Plants) ಹೆಚ್ಚು ಹಾನಿಗೆ ಒಳಗಾಗುವ ಸಾಧ್ಯತೆ ಇದೆ.

ಅಡಿಕೆ ಬೆಳೆಯುವ ಬಹುತೇಕ ರೈತರು ಈ ಸಮಯದಲ್ಲಿ ‘ಕಾಂಡ ಸುಡುವ’ (Sun Scorch / Sun Burn) ಪ್ರಮುಖ ಸಮಸ್ಯೆಯನ್ನು ಎದುರಿಸುತ್ತಾರೆ. ಈ ಸಮಸ್ಯೆ ಸಾಮಾನ್ಯವಾಗಿ ತೋಟದ ಕೊನೆಯ ಸಾಲುಗಳಲ್ಲಿ, ವಿಶೇಷವಾಗಿ ಪಶ್ಚಿಮ ಮತ್ತು ಉತ್ತರ ದಿಕ್ಕಿನಲ್ಲಿ ಇರುವ ಗಿಡಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ.

ಇದನ್ನೂ ಓದಿ: Pitrarjita Asti Rights: ಪಿತ್ರಾರ್ಜಿತ ಆಸ್ತಿ ಅಂದ್ರೆ ಏನು? ಯಾರಿಗೆಲ್ಲ ಹಕ್ಕು ಇರುತ್ತದೆ? ಆಸ್ತಿ ಹಕ್ಕುಗಳ ಸಂಪೂರ್ಣ ಮಾಹಿತಿ…

ಬೇಸಿಗೆಯಲ್ಲಿ ಅಡಿಕೆ ಕಾಂಡ ಸುಡುವುದಕ್ಕೆ ಕಾರಣವೇನು?

ಒಂದು ಎಕರೆ ಪ್ರದೇಶದಲ್ಲಿ ಸರಾಸರಿ 550 ರಿಂದ 600 ಅಡಿಕೆ ಗಿಡಗಳು ಇದ್ದರೆ, ಅವುಗಳಲ್ಲಿ ಕೊನೆಯ ಒಂದು ಅಥವಾ ಎರಡು ಸಾಲಿನ ಗಿಡಗಳು ಹೆಚ್ಚು ಬಿಸಿಲಿಗೆ ನೇರವಾಗಿ ಒಳಗಾಗುತ್ತವೆ.

ಪೂರ್ವ-ಪಶ್ಚಿಮ ದಿಕ್ಕಿನಲ್ಲಿ ನಾಟಿ ಮಾಡಿರುವ ತೋಟಗಳಲ್ಲಿ ಪಶ್ಚಿಮಾಭಿಮುಖ ಗಿಡಗಳು ಮಧ್ಯಾಹ್ನದ ತೀವ್ರ ಬಿಸಿಲಿಗೆ ಹೆಚ್ಚು ಒಳಗಾಗುತ್ತವೆ. ಈ ತೀವ್ರ ಬಿಸಿಲಿನ ಶಾಖದಿಂದ ಕಾಂಡದ ಹೊರತೊಗಟೆ ಕೆಂಪಾಗುವುದು, ಒಣಗುವುದು ಮತ್ತು ಕೆಲವೊಮ್ಮೆ ಬಿರುಕು ಬಿಡುವುದು ಸಾಮಾನ್ಯ ಲಕ್ಷಣಗಳಾಗಿವೆ.

ಕಾಂಡದ ಒಳಭಾಗದಲ್ಲಿ ಇರುವ ಜೈಲಂ ಮತ್ತು ಫ್ಲೋಯಂ (Xylem and Phloem Vessels) ಎಂಬ ನಳಿಕೆಗಳು ಭೂಮಿಯಿಂದ ನೀರು ಮತ್ತು ಪೋಷಕಾಂಶಗಳನ್ನು ಮೇಲಕ್ಕೆ ಕಳುಹಿಸುವ ಮುಖ್ಯ ಕಾರ್ಯ ಮಾಡುತ್ತವೆ.

ಈ ನಳಿಕೆಗಳು ನಮ್ಮ ದೇಹದ ನರಗಳಂತೆ ಕೆಲಸ ಮಾಡುತ್ತವೆ. ಕಾಂಡ ಸುಟ್ಟು ಹಾನಿಯಾದಾಗ ಈ ಜೈಲಂ ಮತ್ತು ಫ್ಲೋಯಂ ವ್ಯವಸ್ಥೆ ಹಾನಿಗೊಳಗಾಗುತ್ತದೆ. ಇದರಿಂದ ಗಿಡಕ್ಕೆ ಬೇಕಾದಷ್ಟು ನೀರು ಮತ್ತು ಆಹಾರ ದೊರೆಯುವುದಿಲ್ಲ. ಪರಿಣಾಮವಾಗಿ ಗಿಡದ ಬೆಳವಣಿಗೆ ಕುಂಠಿತವಾಗುತ್ತದೆ.

ಇದನ್ನೂ ಓದಿ: Sarakari Jameenu Sakrama: ಸರ್ಕಾರಿ ಜಮೀನು ಸಕ್ರಮ ಹೇಗೆ? ರೈತರಿಗೆ ಸಂಪೂರ್ಣ ಮಾರ್ಗದರ್ಶಿ

ಕಾಂಡ ಬಿರುಕು ಮತ್ತು ಸೆಕೆಂಡರಿ ಇನ್ಫೆಕ್ಷನ್

ತೀವ್ರ ಬಿಸಿಲಿನಿಂದ ಕಾಂಡ ಬಿರುಕು ಬಿಟ್ಟರೆ ಅದು ಇನ್ನಷ್ಟು ಅಪಾಯಕಾರಿಯಾಗಿದೆ. ಬಿರುಕು ಬಿಟ್ಟ ಜಾಗದಲ್ಲಿ ತುಕ್ಕು ಹಿಡಿದಂತೆ ಕಾಣುವುದು, ಒಳಭಾಗ ಕೊಳೆಯುವುದು ಮತ್ತು ಸೆಕೆಂಡರಿ ಇನ್ಫೆಕ್ಷನ್ (Secondary Infection) ಉಂಟಾಗುವುದು ಸಾಮಾನ್ಯ. ಈ ಸಂದರ್ಭದಲ್ಲಿ ಕೀಟಗಳು ಮತ್ತು ರೋಗಾಣುಗಳು ಗಿಡಕ್ಕೆ ಪ್ರವೇಶಿಸಬಹುದು.

ಒಮ್ಮೆ ಗಿಡಕ್ಕೆ ಇನ್ಫೆಕ್ಷನ್ ಬಂದರೆ ಅದರ ರೋಗ ನಿರೋಧಕ ಶಕ್ತಿ (Disease Resistance) ಕುಂಠಿತವಾಗುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ಗಾಳಿ, ಮಳೆ ಅಥವಾ ಬೇರೆ ಒತ್ತಡದ ಪರಿಸ್ಥಿತಿಗಳಲ್ಲಿ ಗಿಡ ಸುಲಭವಾಗಿ ಉರುಳಿ ಬೀಳುವ ಸಾಧ್ಯತೆ ಇರುತ್ತದೆ. ಬಲವಾದ ಗಾಳಿಯ ಸಮಯದಲ್ಲಿ ಹಾನಿ ಹೆಚ್ಚಾಗುತ್ತದೆ.

ಇದನ್ನೂ ಓದಿ: Farmer ID Update: ರೈತರೇ ಸರ್ಕಾರಿ ಯೋಜನೆ ಪ್ರಯೋಜನ ಪಡೆಯಲು ಕೂಡಲೇ ನಿಮ್ಮ ಎಫ್‌ಐಡಿ ಅಪ್ಡೇಟ್ ಮಾಡಿಸಿ | ಅಪ್ಡೇಟ್ ಮಾಡುವ ವಿಧಾನ ಇಲ್ಲಿದೆ…

ಇಳುವರಿಯ ಮೇಲೆ ಪರಿಣಾಮ

ಬಹಳಷ್ಟು ರೈತರು ‘ಕಾಂಡ ಸುಟ್ಟರೆ ಇಳುವರಿ ಕಡಿಮೆಯಾಗುತ್ತದೆಯಾ?’ ಎಂದು ಪ್ರಶ್ನಿಸುತ್ತಾರೆ. ಹೌದು, ಕಾಂಡದ ಹಾನಿ ಗಿಡದ ಆಹಾರ ಸಾಗಣೆ ವ್ಯವಸ್ಥೆಯನ್ನು ಹಾಳು ಮಾಡುತ್ತದೆ. ಇದರ ಪರಿಣಾಮವಾಗಿ ಗಿಡಕ್ಕೆ ಬೇಕಾದಷ್ಟು ಪೋಷಕಾಂಶಗಳು ಸಿಗುವುದಿಲ್ಲ.

ಹೀಗಾಗಿ ಹೂ ಬಿಡುವಿಕೆ (Flowering) ಕಡಿಮೆಯಾಗಬಹುದು, ಕಾಯಿ ಕಟ್ಟುವಿಕೆ (Nut Setting) ಕುಂಠಿತವಾಗಬಹುದು ಮತ್ತು ಅಂತಿಮವಾಗಿ ಇಳುವರಿ (Yield) ಕಡಿಮೆಯಾಗಬಹುದು.

ಹೆಚ್ಚಾಗಿ ಹಾನಿಗೊಳಗಾದ ಗಿಡಗಳು ತಮ್ಮ ಸಂಪೂರ್ಣ ಉತ್ಪಾದನಾ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತವೆ. ಕೆಲವೊಮ್ಮೆ ಗಿಡ ಸಂಪೂರ್ಣವಾಗಿ ಒಣಗಿ ಹೋಗುವ ಪರಿಸ್ಥಿತಿ ಕೂಡ ಉಂಟಾಗಬಹುದು.

ಇದನ್ನೂ ಓದಿ: Land Podi Delay: ಜಮೀನು ಪೋಡಿ: ನಿಮ್ಮ ಅರ್ಜಿ ಸ್ಥಿತಿ ಹೇಗಿದೆ? ರೈತರಿಗೆ ಮಹತ್ವದ ಮಾಹಿತಿ ಇಲ್ಲಿದೆ…

ಕಾಂಡ ಸುಡುವಿಕೆ ತಡೆಗಟ್ಟುವ ಕ್ರಮಗಳು (Preventive Measures)

1. ಸುಣ್ಣ ಲೇಪನ (Lime Coating)

ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಅಡಿಕೆ ಕಾಂಡಗಳಿಗೆ ಸುಣ್ಣ ಲೇಪನ ಮಾಡುವುದು ಅತ್ಯಂತ ಮುಖ್ಯ. ಬಿಳಿ ಬಣ್ಣದ ಸುಣ್ಣ ಸೂರ್ಯನ ಕಿರಣಗಳನ್ನು ಪ್ರತಿಫಲಿಸುತ್ತದೆ. ಇದರಿಂದ ಕಾಂಡದ ಮೇಲಿನ ಬಿಸಿಲಿನ ತೀವ್ರತೆ ಕಡಿಮೆಯಾಗುತ್ತದೆ. ಒಂದು ಎಕರೆಗೆ ಬೇಕಾಗುವ ಪ್ರಮಾಣ:

  • ನೀರು – 40 ರಿಂದ 45 ಲೀಟರ್
  • ಸುಣ್ಣ – 10 ರಿಂದ 12 ಕೆಜಿ
  • ಕಾಪರ್ ಆಕ್ಸಿಕ್ಲೋರೈಡ್ – 500 ಗ್ರಾಂ

ಈ ಮಿಶ್ರಣವನ್ನು ಚೆನ್ನಾಗಿ ಬೆರೆಸಿ ಕಾಂಡಕ್ಕೆ ಲೇಪಿಸಬೇಕು. ಲೇಪನ ಕೈಗೆ ಸಿಗುವಷ್ಟು ಎತ್ತರದವರೆಗೆ ಮಾಡಬೇಕು.

Arecanut Summer Management
Arecanut Summer Management

ಇದನ್ನೂ ಓದಿ: Karnataka Summer Weather Forecast 2026: ರಾಜ್ಯಾದ್ಯಂತ ಇನ್ನು ಬಿಸಿಲಬ್ಬರ | ಯಾವ ಜಿಲ್ಲೆಗೆ ಎಷ್ಟು ತಾಪಮಾನ? ಇಲ್ಲಿದೆ ಹವಾಮಾನ ಇಲಾಖೆಯ ತಾಜಾ ಅಪ್ಡೇಟ್ಸ್

2. ರೋಗನಾಶಕ ಬಳಕೆ (Fungicide Use)

ಸುಣ್ಣದ ಜೊತೆ ಕಾಪರ್ ಆಕ್ಸಿಕ್ಲೋರೈಡ್ ಮಿಶ್ರಣ ಮಾಡುವುದು ಬಹಳ ಉಪಯುಕ್ತ. ಇದು ರೋಗನಾಶಕ (Fungicide) ಗುಣ ಹೊಂದಿದ್ದು, ಸೆಕೆಂಡರಿ ಇನ್ಫೆಕ್ಷನ್ ತಡೆಯಲು ಸಹಾಯ ಮಾಡುತ್ತದೆ.

3. ಅಂಟುವಿಕೆ ಹೆಚ್ಚಿಸಲು (Binding Agents)

ಸುಣ್ಣ ಲೇಪನ ಕಾಂಡಕ್ಕೆ ಚೆನ್ನಾಗಿ ಅಂಟಲು ಕೆಲವರು: ಮೈದಾ ಹಿಟ್ಟು 500 ಗ್ರಾಂ, ಬೆಲ್ಲ 500 ಗ್ರಾಂ ಅಥವಾ ಗಮ್ (Gum) ಬಳಸುತ್ತಾರೆ. ಇದು ಲೇಪನವನ್ನು ಹೆಚ್ಚು ದಿನ ಉಳಿಯುವಂತೆ ಮಾಡುತ್ತದೆ.

ಇದನ್ನೂ ಓದಿ: Krushi Pumpset: ಶೀಘ್ರ ಸಂಪರ್ಕ ಯೋಜನೆ | ಕೃಷಿ ಪಂಪ್‌ಸೆಟ್‌ಗೆ ತಕ್ಷಣ ವಿದ್ಯುತ್ ಪಡೆಯಲು ಹೇಗೆ ಅರ್ಜಿ ಸಲ್ಲಿಸಬೇಕು? ಸಂಪೂರ್ಣ ಮಾಹಿತಿ…

4. ಶೇಡ್ ನೆಟ್ ಬಳಕೆ (Shade Net Protection)

ತೀವ್ರವಾಗಿ ಹಾನಿಗೊಳಗಾದ ಗಿಡಗಳಿಗೆ ಹಸಿರು ಬಣ್ಣದ ಶೇಡ್ ನೆಟ್ (Green Shade Net) ಕಟ್ಟುವುದು ಉತ್ತಮ ವಿಧಾನ. ಇದು ನೇರ ಬಿಸಿಲು ತಡೆಯಲು ಸಹಾಯ ಮಾಡುತ್ತದೆ. ಕೆಲವರು ತೆಂಗಿನ ಗರಿ ಅಥವಾ ಅಡಿಕೆ ಗರಿ ಕಟ್ಟುತ್ತಾರೆ. ಆದರೆ ನೆಲಕ್ಕೆ ತಾಗಿದರೆ ಟರ್ಮೈಟ್ (Termite) ಹಾನಿ ಸಂಭವಿಸಬಹುದು.

5. ಗಾಳಿ ತಡೆ ಮತ್ತು ನೆರಳು (Wind Break and Shade Management)

ಹೊಸ ತೋಟ ಸ್ಥಾಪನೆ ಮಾಡುವಾಗ ಸುತ್ತಲು ಗಾಳಿ ತಡೆ (Wind Barrier) ವ್ಯವಸ್ಥೆ ಮಾಡುವುದು ಉತ್ತಮ. ಸಿಲ್ವರ್ ಓಕ್, ತೆಂಗು, ತೇಗ ಮುಂತಾದ ಗಿಡಗಳನ್ನು ಬಳಸಬಹುದು. ಆದರೆ ಕೆಲವೊಮ್ಮೆ ನೆರಳಿನ ಸ್ಪರ್ಧೆ ಸಮಸ್ಯೆ ಉಂಟಾಗಬಹುದು.

ಇತ್ತೀಚೆಗೆ ತೋಟದ ಸುತ್ತಲೇ ಅಡಿಕೆ ಗಿಡಗಳನ್ನು ದಟ್ಟವಾಗಿ ನಾಟಿ ಮಾಡುವ ವಿಧಾನವನ್ನು ಕೆಲ ತಜ್ಞರು ಶಿಫಾರಸು ಮಾಡುತ್ತಿದ್ದಾರೆ. ಪ್ರತಿ 4 ಅಡಿ ಅಂತರದಲ್ಲಿ ಅಡಿಕೆ ನಾಟಿದರೆ ಅದು ಗಾಳಿ ತಡೆ ಮತ್ತು ನೆರಳಿನ ಕೆಲಸ ಮಾಡುತ್ತದೆ.

ಇದನ್ನೂ ಓದಿ: NADEP Compost Guide: ಸಗಣಿ ಗೊಬ್ಬರವನ್ನು ಬಳಸುವ ವೈಜ್ಞಾನಿಕ ವಿಧಾನ | ಹೀಗೆ ಬಳಸಿದರೆ ಸಿಗಲಿದೆ ಹತ್ತಾರು ಲಾಭ

ಈಗಾಗಲೇ ಬಿರುಕು ಬಿಟ್ಟ ಗಿಡಗಳಿಗೆ ಪರಿಹಾರ

ಒಪನ್ ಆಗಿರುವ ಬಿರುಕುಗಳಲ್ಲಿ 3 ಗ್ರಾಂ ಕಾಪರ್ ಆಕ್ಸಿಕ್ಲೋರೈಡ್ ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ಕಾಂಡ ನೆನೆಸಬೇಕು. ನಂತರ ಅಂಟು ಮಣ್ಣು (Clay Soil) ಅಥವಾ ಜೇಡಿ ಮಣ್ಣು ತುಂಬಬೇಕು.

ಮೇಲಿನಿAದ ಶೇಡ್ ನೆಟ್ ಕಟ್ಟಬೇಕು. ಇದರಿಂದ ಗಿಡದಲ್ಲಿ ರೆಸಿಸ್ಟೆನ್ಸ್ (Resistance) ಹೆಚ್ಚಾಗಿ ಮತ್ತೆ ಸಾಮಾನ್ಯ ಸ್ಥಿತಿಗೆ ಬರುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: Ginnada Halu Mahatva: ಗಿಣ್ಣದ ಹಾಲುಂಡ ಕರು ರೈತರಿಗೆ ತರುವುದು ಸಿರಿ | ಹೈನುಗಾರಿಕೆಯಲ್ಲಿ ಅಧಿಕ ಲಾಭ ಗಳಿಕೆಗೆ ಗಿಣ್ಣದ ಹಾಲಿನ ಮಹತ್ವ ತಿಳಿಯಿರಿ

ಗಿಡದ ಆರೋಗ್ಯ ಕಾಪಾಡಿ

ಬೇಸಿಗೆ ತಿಂಗಳಲ್ಲಿ ಅಡಿಕೆ ತೋಟದಲ್ಲಿ ಕಾಂಡ ಸುಡುವುದು ಒಂದು ಸಾಮಾನ್ಯ ಆದರೆ ಗಂಭೀರ ಸಮಸ್ಯೆ. ಸರಿಯಾದ ಸಮಯದಲ್ಲಿ ಸುಣ್ಣ ಲೇಪನ, ರೋಗನಾಶಕ ಬಳಕೆ, ಶೇಡ್ ವ್ಯವಸ್ಥೆ ಮತ್ತು ಗಾಳಿ ತಡೆ ಕ್ರಮಗಳನ್ನು ಅನುಸರಿಸಿದರೆ ಈ ಸಮಸ್ಯೆಯನ್ನು ಬಹುತೇಕ ಮಟ್ಟಿಗೆ ನಿಯಂತ್ರಿಸಬಹುದು.

ಗಿಡದ ಆರೋಗ್ಯ ಕಾಪಾಡಿದರೆ ಮಾತ್ರ ಉತ್ತಮ ಇಳುವರಿ ಪಡೆಯಲು ಸಾಧ್ಯ. ಹೀಗಾಗಿ ಪ್ರತಿಯೊಬ್ಬ ರೈತರೂ ಬೇಸಿಗೆ ಆರಂಭಕ್ಕೂ ಮುನ್ನ ತೋಟ ಪರಿಶೀಲನೆ ಮಾಡಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಮುಂಜಾಗ್ರತಾ ಕ್ರಮವೇ ಉತ್ತಮ ಪರಿಹಾರ (Prevention is Better than Cure).

20 Liter Milk Giving Deshi Cow: ₹15 ಸಾವಿರದಲ್ಲಿ 20 ಲೀಟರ್ ಹಾಲು ನೀಡುವ ದೇಸಿ ಹಸು | ರೈತರಿಗೆ ಸುವರ್ಣಾವಕಾಶ

WhatsApp Group Join Now
Telegram Group Join Now

Leave a Comment